ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 21-22 ರಂದು ಕುವೈತ್ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕುವೈತ್ ಭೇಟಿ ಕುತೂಹಲ ಕೆರಳಿಸಿದೆ.
43 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಕುವೈತ್ಗೆ ಭೇಟಿ ನೀಡುತ್ತಿದ್ದಾರೆ. 1981ರಲ್ಲಿ ಭಾರತದ ಪ್ರಧಾನಿಯೊಬ್ಬರು ಕುವೈತ್ಗೆ ಭೇಟಿ ನೀಡಿದ್ದರು.
ಗಲ್ಫ್ ಸಹಕಾರ ಮಂಡಳಿಯಲ್ಲಿ (GCC) ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಭೇಟಿ ನೀಡದ ಏಕೈಕ ದೇಶವೆಂದರೆ ಕುವೈತ್. ಕುವೈತ್ ದೇಶಕ್ಕೆ ಪ್ರಸ್ತುತ ಜಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕುವೈತ್ ಜೊತೆಗೆ, GCC ಯು ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್, ಸೌದಿ ಅರೇಬಿಯಾ, ಓಮನ್ ಮತ್ತು ಕತಾರ್ ಅನ್ನು ಸಹ ಒಳಗೊಂಡಿದೆ.